ಪರಿಚಯ
ಪ್ರಣತಿ, ಒಂದು ಮನೆಯೊಳಗಿನ ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹಿಸೋ
ಉದ್ದೇಶಕ್ಕೆಂದು ಹುಟ್ಟಿಕೊಂಡಿದ್ದು. ಆದರೆ, ಯಾವಾಗ ಪ್ರಣತಿಯನ್ನು ಕಟ್ಟುವ ಕೆಲಸ
ಆರಂಭವಾಯಿತೋ, ಆಗ ಪ್ರಣತಿಯ ಪರಿಧಿ ದೊಡ್ಡದಾಯಿತು, ಸಮಾನ ಮನಸ್ಕರು ಜೊತೆಗೂಡಿದರು.
ಜತೆಗೂಡಿ ಚರ್ಚಿಸಿದಾಗ, ಪ್ರಣತಿಯ ಕೆಲಸಕಾರ್ಯಗಳೇನು ಅನ್ನುವುದರ ಸ್ಪಷ್ಟ ಪರಿಕಲ್ಪನೆ
ಮೂಡಿಬಂತು. ಇಂದು ಪ್ರಣತಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನ ಕೈಲಾದ
ಕೊಡುಗೆಗಳನ್ನು, ಸಹಕಾರವನ್ನು ನೀಡುವುದರ ಜೊತೆಗೆ, ಕರ್ನಾಟಕ ಸಂಗೀತಕ್ಕೂ ಪ್ರೋತ್ಸಾಹ
ನೀಡುವ ಗುರಿ ಇಟ್ಟುಕೊಂಡಿದೆ. ಕೇವಲ ಇಷ್ಟಕ್ಕೇ ಸೀಮಿತವಲ್ಲ, ಸಂಸ್ಕೃತಿ ಮತ್ತು
ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಯುವುದರ ಮೂಲಕ ಅವುಗಳ ಕುರಿತ
ಸಕಾರಾತ್ಮಕ ಸಂದೇಶವನ್ನು ಎಲ್ಲೆಡೆ ಹರಡಬೇಕೆಂಬಾಸೆಯೂ ಪ್ರಣತಿಗಿದೆ.
ಪ್ರಣತಿಯ ಬೆಳಕು ಲೋಕಾರ್ಪಣೆಗೊಂಡಿದ್ದು ಫ಼ೆಬ್ರವರಿ ೧೦, ೨೦೦೮ರಂದು. ಹೆಚ್ಚಿನ
ಮಾಹಿತಿಗಾಗಿ ಇಲ್ಲಿ
ಕ್ಲಿಕ್ಕಿಸಿ.
ಪರಿಸರ ಕಾಳಜಿ ಹೊಂದಿದ ಬರಹಗಳನ್ನು ಒಳಗೊಂಡ ಚಿತ್ರಚಾಪ ಪ್ರಣತಿ ಪ್ರಕಟಿಸಿದ ಮೊದಲ
ಕೃತಿ. ಕನ್ನಡ ಸಾಹಿತ್ಯಪ್ರಪಂಚದಲ್ಲಿಯೇ, ಲಲಿತ ಪ್ರಬಂಧಗಳನ್ನು, ಪ್ರವಾಸ ಕಥನಗಳನ್ನು,
ಕವನಗಳನ್ನು ಒಳಗೊಂಡು ಪ್ರಕಟಗೊಂಡ ಮೊದಲ ಹೊತ್ತಗೆ ಈ ಚಿತ್ರ ಚಾಪ. ಕನ್ನಡದ
ಐದು ಉದಯೋನ್ಮುಖ ಬರಹಗಾರರು ಈ ಪುಸ್ತಕದಲ್ಲಿ ತಮ್ಮ ಭಾವ ಪ್ರಕಟಗೊಳಿಸಿದ್ದಾರೆ. ಸುಂದರ
ರೇಖಾಚಿತ್ರಗಳು ಈ ಕಿರುಹೊತ್ತಗೆಯ ಅಂದ ಹೆಚ್ಚಿಸಿವೆ.
ಪ್ರಣತಿ ಕನ್ನಡದ ಮೊತ್ತಮೊದಲ ಅಂತರ್ಜಾಲ ಬರಹಗಾರರ ಕೂಟವೊಂದನ್ನೂ ಏರ್ಪಡಿಸಿತ್ತು. ಈ
ಕೂಟದಲ್ಲಿ ಎಣಿಕೆಗೂ ಮೀರಿ ಭಾಗವಹಿಸಿದ ಆಸಕ್ತರು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು
ಸಹಕರಿಸಿದರು. ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವ ಆಸಕ್ತರ ಜೊತೆಗೆ ಹಲವು ಸಾಹಿತಿಗಳೂ
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೆಚ್ಚಿನ ವಿವರಗಳು ಇಲ್ಲಿವೆ.