ಪರಿಚಯ ಪ್ರಣತಿ, ಒಂದು ಮನೆಯೊಳಗಿನ ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹಿಸೋ ಉದ್ದೇಶಕ್ಕೆಂದು ಹುಟ್ಟಿಕೊಂಡಿದ್ದು. ಆದರೆ, ಯಾವಾಗ ಪ್ರಣತಿಯನ್ನು ಕಟ್ಟುವ ಕೆಲಸ ಆರಂಭವಾಯಿತೋ, ಆಗ ಪ್ರಣತಿಯ ಪರಿಧಿ ದೊಡ್ಡದಾಯಿತು, ಸಮಾನ ಮನಸ್ಕರು ಜೊತೆಗೂಡಿದರು. ಜತೆಗೂಡಿ ಚರ್ಚಿಸಿದಾಗ, ಪ್ರಣತಿಯ ಕೆಲಸಕಾರ್ಯಗಳೇನು ಅನ್ನುವುದರ ಸ್ಪಷ್ಟ ಪರಿಕಲ್ಪನೆ ಮೂಡಿಬಂತು. ಇಂದು ಪ್ರಣತಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನ ಕೈಲಾದ ಕೊಡುಗೆಗಳನ್ನು, ಸಹಕಾರವನ್ನು ನೀಡುವುದರ ಜೊತೆಗೆ, ಕರ್ನಾಟಕ ಸಂಗೀತಕ್ಕೂ ಪ್ರೋತ್ಸಾಹ ನೀಡುವ ಗುರಿ ಇಟ್ಟುಕೊಂಡಿದೆ. ಕೇವಲ ಇಷ್ಟಕ್ಕೇ ಸೀಮಿತವಲ್ಲ, ಸಂಸ್ಕೃತಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಯುವುದರ ಮೂಲಕ ಅವುಗಳ ಕುರಿತ ಸಕಾರಾತ್ಮಕ ಸಂದೇಶವನ್ನು ಎಲ್ಲೆಡೆ ಹರಡಬೇಕೆಂಬಾಸೆಯೂ ಪ್ರಣತಿಗಿದೆ.